ಗೀತಾ ಪಾರಾಯಣ
ನಾವು ೪ ನೇ ಹಂತಿನ ಗೀತಾ ಕಲಿಕೆಯನ್ನು ಮುಗಿಸಿದ ನಂತರ (ಗೀತಾಪರಿವಾರದ ಚಾರಧಾಮ್ ಯಾತ್ರೆ ) ಶ್ರೀ ಕೃಷ್ಣ ಪರಮಾತ್ಮನ ಶ್ರೀಮುಖದಿಂದ ಬಂದಂತಹ ೭೦೦ ಶ್ಲೋಕಗಳನ್ನೊಳಗೊಂಡ ಶ್ರೀಮದ್ಭಗವದ್ಗೀತೆಯನ್ನು ಶುದ್ಧ ಹಾಗೂ ಸ್ಪಷ್ಟವಾಗಿ ಪಠಿಸಿದ ನಂತರ ಆಗುವ ಆನಂದವನ್ನು ವರ್ಣಿಸಲಾಗದು. ಇದೊಂದು ಹೆಮ್ಮೆಯ ವಿಷಯವೂ ಹೌದು. ಅನೇಕ ಜನರು ಈ ೧೮ ಅಧ್ಯಾಯಗಳನ್ನು ದಿನ ನಿತ್ಯವಾಗಿ ಸಾಧಾರಣ ೨ಗಂಟೆಯೊಳಗೆಯೇ ಪಠಿಸುತ್ತಾರೆಂದು ನಾನು ಕೇಳಿದ್ದೇನೆ. ನನ್ನ ವಯ್ಯಕ್ತಿಕ ಇಚ್ಛೆ ಕೂಡ ಇದೇ ಆಗಿತ್ತು . ೪ನೇ ಡಿಸೆಂಬರ ೨೦೨೨ ರಂದು ಗೀತಾಜಯಂತಿಯ ದಿನ ಶ್ರೀ ಕೃಷ್ಣನ ಅನುಗ್ರಹದಿಂದ ನಾವು ಮುಂಬಯಿ ಗೀತಾಪರಿವಾರದ ಹಲವಾರು ಸೇವಾರ್ಥಿಗಳು ಒಟ್ಟಿಗೆ ಸೇರಿ ನಮ್ಮ ಮನೆಯಲ್ಲಿ ಸಂಪೂರ್ಣ ಗೀತಾಪಾರಾಯಣವನ್ನು ಎರಡುವರೆ ಗಂಟೆಯಲ್ಲಿ ಮಾಡಿದ್ದೆವು. ಇದಾದ ನಂತರ ನಾವೆಲ್ಲರೂ ಪ್ರತಿ ತಿಂಗಳು ಬರುವಂತಹ ಏಕಾದಶಿ ದಿನ ಮುಂಬಯಿಯಲ್ಲಿರುವ ಬೇರೇ ಬೇರೇ ದೇವಸ್ಥಾನಗಳಲ್ಲಿ ಸಂಪೂರ್ಣ ಗೀತಾಪಾರಾಯಣವನ್ನು ಪ್ರಚಾರ ಕಾರ್ಯ ಸಹಿತ ನೆರವೇರಿಸುತ್ತಾ ಬಂದಿದ್ದೇವೆ .
ಸೆಪ್ಟೆಂಬರ್ ತಿಂಗಳಿನಿಂದ ನಾವು ಗೀತಾಪರಿವಾರದ ಆನ್ಲೈನ್ ( zoom meet ಹಾಗೂ youtubeನಲ್ಲಿ )ನಲ್ಲಿ ಪ್ರತಿ ರವಿವಾರ ಸಂಪೂರ್ಣ ಗೀತಾಪಾರಾಯಣವನ್ನು ಬೆಳಗ್ಗೆ ೭:೦೦ಗಂಟೆಗೆ ಪ್ರಾರ್ಥನೆ, ದೀಪಪ್ರಜ್ವಲನೆಯಿಂದ ಪ್ರಾರಂಭಿಸಿ ನ್ಯಾಸ , ಗೀತಾಪ್ರಾರ್ಥನೆ, ಗೀತಾಮಹಾತ್ಮೆ , ಧ್ಯಾನಮ್ ಸಹಿತ ೧೮ ಅಧ್ಯಾಯಗಳನ್ನು ಕ್ಷಮಾಯಾಚನೆ , ಗೀತಾ ಆರತಿಯೊಂದಿಗೆ ಶ್ರೀ ಕೃಷ್ಣನಿಗೆ ಸಮರ್ಪಿಸುತ್ತೇವೆ. ಗೀತಾಪರಿವಾರದ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂತಹ ಸಕ್ರೀಯ ಸೇವಾರ್ಥಿಗಳು ಹಾಗು ಎಲ್ಲಾ ಗೀತಾ ಸಾಧಕರು ೧೮ಅಧ್ಯಾಯದ ಪಾರಾಯಣೆಯಲ್ಲಿ ಪರಾಯಣರಾಗಿ ಪಠಣ, ಶ್ರವಣ ಮಾಡಿ ಅತ್ಯಂತ ಆನಂದವನ್ನು ಅನುಭವಿಸುತ್ತಿದ್ದಾರೆಂದು ಹೇಳಲು ಅತಿವ ಹರ್ಷವಾಗುತ್ತದೆ. ತದ ನಂತರ ಹನುಮಾನ್ ಚಾಲೀಸಾದೊಂದಿಗೆ ಈ ಕಾರ್ಯಕ್ರಮ ಮುಕ್ತಾಯವಾಗುತ್ತದೆ
ಇದಲ್ಲದೆ ಪ್ರತಿದಿನ ಗೀತಾಪರಿವಾರದ ಚಾರಧಾಮ ಯಾತ್ರೆಯನ್ನು ಅಂದರೆ ನಾಲ್ಕು ಹಂತವನ್ನು ಮುಗಿಸಿದ ಗೀತಾಪ್ರೇಮಿಗಳೊಂದಿಗೆ ಗೀತಾವ್ರತಿ ಸಾಧಕರು ಬೆಳಗ್ಗೆ ೬:೩೦ ಗಂಟೆಗೆ ಹಾಗೂ ರಾತ್ರಿ ೯:೩೦ ಗಂಟೆಗೆ ಒಂದು ಅಧ್ಯಾಯದ ಪಠಣ ತದನಂತರ ಐದು ಬಾರಿ ಹನುಮಾನ್ ಚಾಲೀಸಾದ ಪಠಣ, ಶ್ರವಣ ಮಾಡುತ್ತಾರೆ. ಈ ಗೀತಾಪಾರಾಯಣದಲ್ಲಿ ಭಾಗವಹಿಸುತ್ತಿರುವ ನಿಮೆಲ್ಲರಿಗೂ ಭಗವಂತ ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ. ಸ್ವಾಮಿ ಗೋವಿಂದದೇವ್ ಗಿರಿಜೀ ಗುರುದೇವ ಅವರ ಇಡೀ ವಿಶ್ವವನ್ನೇ ಗೀತಾಮಯ ಮಾಡುವ ಈ ಯಜ್ಞದಲ್ಲಿ ನಾವೂ ಆದಷ್ಟೂ ನಮ್ಮ ಸಮಯವನ್ನು ಗೀತಾಸೇವೆಯಲ್ಲಿ ಹಾಗೂ ಪ್ರಚಾರದಲ್ಲಿ ನಮ್ಮನ್ನು ತೊಡಗಿಸಿಕೊಂಡು ನಮ್ಮ ಜೀವನವನ್ನು ಪಾವನವಾಗಿಸಿಕೊಳ್ಳೋಣ.
- Shruti Nayak, Mumbai
[running footer: page number 48 in a lotus]
