मुख्य सामग्री पर जाएँ
गीता मैत्री अंक ६जुलाई से दिसम्बर २०२३
११Soulfull Stanzas

ಮಾಧವ

ಮಾಧವ ಹೇಳಿದ , ಮಾನವ ಬದುಕಿದು
ಬರಿದೇ ನಿಜವಲ್ಲಾ.....
ಬರಿದೇ ನಿಜವಲ್ಲಾ....

ತಾನಾಡಿಸುವಾ ನಾಟಕವಿದು ನಿಜ ,
ಬಣ್ಣದ ಬದುಕೆಲ್ಲಾ .....
ಬರೀ ಬಣ್ಣದ ಬದುಕೆಲ್ಲಾ ...

ನನ್ನಲಿ , ನಿನ್ನಲಿ , ಅವಳಲಿ , ಅವನಲಿ
ಕೇಶವನಿಹನಲ್ಲಾ...?
ಎಲ್ಲೆಲ್ಲೂ ಕೇಶವನಿಹನಲ್ಲಾ ..?

ಕನಸಲಿ , ನನಸಲಿ , ಕಾಯಕ ಕ್ಷಣದಲಿ ,
ನಾನೇ ಹೊಣೆಯಲ್ಲಾ ...
ಎಲ್ಲಕೂ ನಾನೇ ಹೊಣೆಯಲ್ಲಾ ....

ತಪ್ಪಿಗೂ , ಒಪ್ಪಿಗೂ,ಪಾಪಕೂ , ಪುಣ್ಯಕೂ...
ನನ್ನದೇನೂ ಇಲ್ಲಾ...
ನನ್ನದೇನೂ ಇಲ್ಲಾ....

ನಾನಾರೆಂಬುವ ಗೊಂದಲವಾಗಿದೆ ,
ಚಿಂತಿಪೆ ದಿನವೆಲ್ಲಾ...
ನಾ ಚಿಂತಿಪೆ ದಿನವೆಲ್ಲಾ....

ನಂಬುಗೆಯಿಂದಲೇ ಬಾಳಲು ಮುಂದಕೆ
ಶಾಂತಿಯು ದಿನವೆಲ್ಲಾ...
ಶಾಂತಿಯು ದಿನವೆಲ್ಲಾ....

ಮೊಮ್ಮಗ , ಅಜ್ಜೀ.... ಎನ್ನುತ ಕೂಗಲು ,
ಮರೆತೆನು ಜಗವೆಲ್ಲಾ ...
ನಾ ಮರೆತೆನು ಜಗವೆಲ್ಲಾ....

ಮನೆಯೂ , ಮಕ್ಕಳು ಮಾಧವನಾಡುವ
ಗಾರುಡಿಯೇ ಎಲ್ಲಾ...
ಗಾರುಡಿಯೇ ಎಲ್ಲಾ....

ಶ್ರೀಕೃಷ್ಣನ ಮೇಲೊಂದು ಕವಿತೆ
ಹೇ ಕೃಷ್ಣ ...ನೀನಾದೆ ಅರ್ಜುನನಿಗೆ
ನಿಜದ ಗೆಳೆಯ
ಅವನದಲ್ಲ ರಥ
ನಿಜವಾಗಿ ನೀನದರ ಒಡೆಯ
ನಮ್ಮ ಇಂದ್ರಿಯಗಳ ಈಶ
ನೀ ಹೃಷೀಕೇಶ
ಮಿತ್ರನಾಗುವೆ ನೀ
ನಾವಾದರೆ ಗುಡಾಕೇಶ...

ಗೀತಾಚಾರ್ಯ ! ನೀ ಜಗಕೆಲ್ಲ
ಜ್ಞಾನದಾ ಬೆಳಕು
ಮೋಹದಾ ಮುಸುಕು ಅದು
ನಮ್ಮದೇ ಹುಳುಕು!
ಒಡ್ಡಿದರೆ ಗೀತೆಯ ಧಾರೆಗೆ
ಕಣ್ರೆಪ್ಪೆ ಬಾಗುವಾ ಮುನ್ನ
ಹನಿಹನಿಯಲ್ಲು ಕಾಣುವುದು
"ಅವನದೆ' ಚೈತನ್ಯ
'ಅವನದೇ' ಚೈತನ್ಯ...

  • Smt Sandhya Anandatheertha, Bangalore
मूल अंक के पृष्ठ देखें १ पृष्ठ
मूल अंक, पृष्ठ ६३